ಜನರ ಅಂತರಂಗದ ಧ್ವನಿಯಾಗಲು ಹುಟ್ಟಿಕೊಂಡ ಪತ್ರಿಕೆ ಜನವಾದಿ ಕನ್ನಡ ದಿನಪತ್ರಿಕೆ.( RNI NO.KARKAN/2012/56428 ) ನೋಂದಣಿಯೊಂದಿಗೆ ರಾಯಚೂರು ಜಿಲ್ಲೆಯಲ್ಲಿ ಕಳೆದ 6 ವರ್ಷಗಳಿಂದ ಜನರ ಅಂತರಂಗದ ಧ್ವನಿಯಾಗಿ ಸಾಮಾಜಿಕ,ರಾಜಕೀಯ,ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕ ಚಟುವಟಿಕೆಗಳ ವರದಿಗಳಿಗೆ ವೇದಿಕೆಯಾಗುವ ಮೂಲಕ ಜನರ ಮಧ್ಯೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.
7500 ಕ್ಕೂ ಅಧಿಕ ಓದುಗರನ್ನು ಹೊಂದಿರುವ ಜನವಾದಿ ಗ್ರಾಮೀಣ ಪ್ರದೇಶದವರೆಗೂ ತಲುಪಲು ಯತ್ನಿಸುತ್ತಲೆ ಇದೆ.ಆದರೆ, ಸಾರಿಗೆ ಸೌಕರ್ಯಗಳ ಕೊರತೆ ಜಿಲ್ಲೆಯ ಕಟ್ಟ ಕಡೆಯದಾದ ಹಳ್ಳಿಗೂ ಪತ್ರಿಕೆ ತಲುಪಲು ಇದುವರೆಗೂ ಸಾಧ್ಯವಾಗಿಲ್ಲ.ಇಂತಹ ಸಂದರ್ಭದಲ್ಲಿಯೇ ಅಂತರ್ಜಾಲ ಯುಗ ವಿಶ್ವವನ್ನೆ ಒಂದು ಹಳ್ಳಿಯನ್ನಾಸಿದೆ.ಅಂತರ್ಜಾಲ ವ್ಯವಸ್ಥೆ ಜಿಲ್ಲೆಯಲ್ಲಷ್ಟೇ ಅಲ್ಲದೆ ಇಡೀ ವಿಶ್ವ ವ್ಯಾಪಿಯಾಗಿದೆ.
ಇದರ ಸದುಪಯೋಗ ಕಟ್ಟ ಕಡೆಯ ಹಳ್ಳಿಯಲ್ಲಿರುವವರಿಗೂ ಮತ್ತು ರಾಯಚೂರು ಜಿಲ್ಲೆಯ ನಮ್ಮ ಓದುಗ ಬಂಧುಗಳು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಮಾಹಿತಿ ಪಡೆದುಕೊಳ್ಳುವ ಅವಕಾಶ ಜನವಾದಿ ಇ-ಪೇಪರ್ ಕಲ್ಪಿಸಿದೆ.
ಈ ಹಿನ್ನೆಲೆಯಲ್ಲಿ ಜನವಾದಿ ಸಹ ಅಂತರ್ಜಾಲ ಯುಗದೊಂದಿಗೆ ಹೆಜ್ಜೆ ಇರಿಸಿ ಜಿಲ್ಲೆಯ,ಕಲ್ಯಾಣ ಕರ್ನಾಟಕದ,ರಾಜ್ಯದ,ದೇಶದ ಸುದ್ದಿಗಳನ್ನು, ಚಿಂತನೆಗಳನ್ನು,ವಿಮರ್ಶೆ ಗಳನ್ನು ಹಂಚಿಕೊಳ್ಳಲು ಮುಂದಾಗಿದೆ.